前 200 行。
ಸೌರೊನ್ಗಾಗಿ ಹುಡುಕುವಾಗಲೇ ನಮ್ಮಣ್ಣ ಪ್ರಾಣತೆತ್ತ.
ಅವನ ಕೆಲಸ ಈಗ ನನ್ನದು.
ಸೇನಾಧಿಪತಿ ಗಲಾಡ್ರಿಯಲ್.
ಈ ದಳ ನಿಮ್ಮನ್ನು ಪ್ರಪಂಚದ ಅಂಚಿನವರೆಗೂ ಹಿಂಬಾಲಿಸಿದೆ.
ಕೊನೆಯ ಓರ್ಕ್ ಕಾಣಿಸಿಕೊಂಡು ವರ್ಷಗಳೇ ಆಗಿದೆ.
ಈ ಗುರುತು ಇದೆ ಅನ್ನೋದೇ ಸೌರೊನ್ ತಪ್ಪಿಸಿಕೊಂಡಿರೋದರ ಸಾಕ್ಷಿ.
ಆದರೆ ಎಲ್ಲಿ ಅನ್ನೋದೇ ಪ್ರಶ್ನೆ.
ಕೆಟ್ಟದ್ದು ಕಳೀತು.
ಮತ್ತದು ಇಲ್ಲಿಂದ ಯಾಕೆ ಹೋಗಿಲ್ಲ?
ಈ ವೀರರಿಗೆ ಶಾಶ್ವತವಾಗಿ ವಾಸಿಸಲು ಸಮುದ್ರದ ಮೂಲಕ ಹಾದಿ ನೀಡಲಾಗುತ್ತದೆ.
ತುಂಬಾ ಕಾಲ ಸೆಣೆಸಾಡಿದ್ದೀಯ, ಗಲಾಡ್ರಿಯಲ್.
ಕತ್ತಿಯನ್ನ ದೂರ ಇಡು.
ಅದಿಲ್ಲದೆ ನಾನೇನಾಗಬೇಕು?
ಲಾರ್ಡ್ ಕೆಲಿಬ್ರೀಂಬೋರರ ಕಾರ್ಯದ ಪರಿಚಯ ನಿನಗಿದೆಯಾ?
ಎಲ್ಫ್ ಕುಶಲಕರ್ಮಿಗಳಲ್ಲೇ ಮಹಾನ್ ವ್ಯಕ್ತಿ, ಹೌದು.
ಅವರಲ್ಲೊಬ್ಬ ಇಲ್ಯಾಕಿದ್ದಾನೆ?
ಅವಳಿಗೆ ಏನೋ ರೋಗ ಬಂದಿದೆ.
- ಎಲ್ಲಿ ಮೇಯ್ತಾ ಇತ್ತು? - ಹಿಂದೊಮ್ಮೆ ಪೂರ್ವಕ್ಕೆ ಹೋಗಿತ್ತು.
ಪೂರ್ವಕ್ಕೆಲ್ಲಿ?
ಹೋರ್ಡರ್ನ್...
ನಿನಗನಿಸಿಲ್ವಾ ಅಲ್ಲಿ ಇನ್ನೇನಿದೆ ಅಂತ?
ನಮ್ಮ ಅಲೆದಾಟ ಮೀರಿ.
ಯಾರೂ ದಾರಿ ತಪ್ಪಲ್ಲ, ಯಾರೂ ಒಂಟಿಯಾಗಿ ಹೋಗಲ್ಲ.
ಆಕಾಶ ವಿಚಿತ್ರವಾಗಿದೆ.
ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್
- ನೋರಿ! - ಪೋಪ್ಪಿ!
ನಿಂಗೇನು ತಲೆ-ಗಿಲೆ ಕೆಟ್ಟಿದೆಯಾ? ಅಲ್ಲಿಂದ ದೂರ ಹೋಗು!
ಹಾಗೆಲ್ಲಾ ಯಾರನ್ನೂ ಹಿಂಬಾಲಿಸಬಾರದು.
ನೀನಿಲ್ಲಿ ಇರಬಾರದು.
ಬಿಸಿನೇ ಇಲ್ಲ.
ಸರಿ. ಬಿಸಿ ಇಲ್ಲ.
ಅಲ್ಲೊಬ್ಬ ದೈತ್ಯ ಇರೋದಂತೂ ಸುಳ್ಳಾಗಲ್ಲ.
ಆ ಮುಖ ಮಾಡ್ತಿದ್ದಾಳೆ. ಆ ಮುಖ ಬೇಡ, ನೋರಿ...
ನೋರಿ!
ನೋರಿ, ಬೇಡ!
ನೋರಿ, ಬೇಡ! ಅವನು ಸತ್ತಿದ್ದಾನೆ! ಬಾ!
ಇಲ್ಲ! ಬೇಡ! ದಯವಿಟ್ಟು!
ಇಲ್ಲ!
ಏನು...
ನಿಮ್ಮಮ್ಮ ನಿನ್ನ ಸಾಯಿಸ್ತಾಳೆ.
ಅವಳಿಗೆ ಹೇಳಬೇಡ. ನಾನೂ ಹೇಳಲ್ಲ. ಬೇಗ.
ಇವನನ್ನ ಇಲ್ಲೇ ಬಿಡೋಕಾಗಲ್ಲ, ತೋಳಗಳು ಬರ್ತವೆ.
- ಆದ್ರೆ? - ಅದು ನಮ್ಮ ಸ್ವಭಾವ ಅಲ್ಲ.
ಅದು ನಿನ್ನ ಸ್ವಭಾವ ಅಲ್ಲ.
ನನಗೊಬ್ಬಳಿಗೇ ಅವನನ್ನ ಹೊರೋಕಾಗಲ್ಲ. ಸಹಾಯ ಮಾಡ್ತೀಯಾ ಇಲ್ವಾ?
- ಇಲ್ಲ. - ಪೋಪ್ಪಿ!
ಈ ದೈತ್ಯನನ್ನ ನಾವು ಹೊರೋದಾದ್ರೂ ಹೇಗೆ?
ನಕ್ಷತ್ರ ಬಿದ್ದಿರಬೇಕು.
ದೊಡ್ಡದು.
ಇನ್ನೂ ಎಷ್ಟು ಸಂಜ್ಞೆಗಳು ಬೇಕು?
ನನ್ನ ಕೇಳಿದ್ರೆ, ನಾವೀಗಲೇ ಜಾಗ ಖಾಲಿ ಮಾಡಿ ಹೋಗಬೇಕು.
ಹಾಗಿದ್ರೆ ಹಬ್ಬ?
ಈಗಲೇ ದುಡುಕಿ ಏನನ್ನೂ ಮಾಡೋದು ಬೇಡ.
ನಾವು ಹೊರಗಿಗಿಂತ ಬಿಡಾರದಲ್ಲಿ ಇರೋದೇ ಸುರಕ್ಷಿತ.
ಆದರೂ ನೀವಿಬ್ರೂ ಒಂದು ಕಣ್ಣಿಟ್ಟಿರಿ.
- ಮಲ್ವಾ ಹೇಳಿದ್ದು ಸರಿ. - ಹೌದು.
ಇದು ಶುಭಶಕುನ ಅಲ್ಲ.
ಈಗ, ಹೊರಡು. ಹೋಗು.
- ಸರಿ... - ಹೋಗು. ಬೇಗ.
ನೋಡಿ ಅವನನ್ನ. ಎಷ್ಟು ರಕ್ತ ಹೋಗ್ತಿದೆ.
- ಅವನೊಬ್ಬ... - ರಾಕ್ಷಸನಲ್ಲ!
ಆಯ್ತಮ್ಮ, ಬುದ್ಧಿವಂತೆ. ಇನ್ನೇನವನು?
ದೊಡ್ಡ ಮನುಷ್ಯ ಇರಬಹುದು.
ಮನುಷ್ಯನಾ?
ಇಲ್ವೇ ಇಲ್ಲ. ಪಚ್ಚಡಿ ಆಗಿರ್ತಿದ್ದ.
ಎಲ್ಫ್ ಆಗಿರಬಹುದಾ?
ಕಿವಿ ಹಾಗಿಲ್ಲ. ನೋಡಕ್ಕೂ ಏನು ಚೆನ್ನಾಗಿಲ್ಲ.
ಎಲ್ಫ್ಗಳು ಆಕಾಶದಿಂದ ಉದುರಲ್ಲ.
ಯಾರೂ ಉದುರಲ್ಲ. ನನಗೆ ಗೊತ್ತಿರೋ ಹಾಗೆ.
ಇವನು ಉದುರಿದ.
- ಎಳೀತಾ ಇದ್ದೀಯಾ ಏನು? - ಹೌದು, ಎಳೀತಿದ್ದೀನಿ!
ಇನ್ನೂ ಜೋರಾಗಿ ಎಳಿ!
ಅಸಾಧ್ಯ. ಆ ಹಳೇ ಬಂಡಿಯಲ್ಲಿ ಇವನು ಹಿಡಿಸಲ್ಲ.
ಒಂದು ರಾತ್ರಿಗಷ್ಟೇ.
ಬೆಳಿಗ್ಗೆ ಅವನಿಗೇನಾದ್ರು ಊಟ ಕೊಟ್ಟು ಕಳಿಸಿಬಿಡೋಣ.
- ಎಲ್ಲಿಗೆ? - ಅದನ್ನ ನಾಳೆ ನೋಡಿಕೊಳ್ಳೋಣ.
- ಇದೇನು ಆಟಾನಾ? - ಅಂದರೆ?
- ನನಗೆ ಇದೇನೂ ಬೇಕಿರಲಿಲ್ಲ. - ಈಗ ವಾಪಸ್ ಹೋಗಬೇಡ.
- ಯಾಕಂದ್ರೆ ನನಗಾಗಲ್ಲ. - ಯಾಕಂದ್ರೆ ನೀನು ಹೋಗಲ್ಲ.
ಈ ಆಗಂತುಕ ಮನುಷ್ಯನೋ, ಎಲ್ಫೋ,
ಅಥವಾ ಯಾವುದೋ ರೆಕ್ಕೆ ಮುರಿದ ಹದ್ದಲ್ಲ.
- ಅದು ಆಗ. - ಇವನು ಬೇರೆ ಏನೋ.
ಇವನು ಅಪಾಯಕಾರಿ ಇರಬಹುದು.
ಮಲ್ವಾ ಮತ್ತು ಸೋದರಿಯರಂತೇ ಮಾತಾಡ್ತಿದ್ದೀಯ.
ಅವರಷ್ಟೇ ಅಲ್ಲ.
ಈ ಅಪರಿಚಿತನಿಗೆ ಸಹಾಯ ಮಾಡಿದ್ದು ಗೊತ್ತಾದ್ರೆ
ಮತ್ತು ಮುಂದಿನ ಮೂರು ಮಾಸಗಳು ಏನಾದ್ರೂ ಕೆಟ್ಟದು ಆದ್ರೆ
ತಪ್ಪು ನಮ್ಮದೇ ಆಗಿರುತ್ತೆ.
ಮಂಜು ಜಾಸ್ತಿ ಕಾಲ ಇದ್ದರೆ ಚಕ್ರ ದಾರಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತೆ.
- ಅಯ್ಯೋ ದೇವರೇ! - ಬೇಗ, ಅದು ಅಪ್ಪಳಿಸೋದರೊಳಗೆ!
ಈಗ ಅವನ ಬಗ್ಗೆ ಯೋಚಿಸ್ತಿದ್ದೀಯ.
ಅಲ್ಲ! ಈ ಬಂಡಿ, ಇದು ನಂದಲ್ಲ!
ಯಾಕಿಂಗೆ ಮಾಡ್ತಿದ್ದೀಯ, ನೋರಿ?
ಅವನು ನನ್ನ ಜವಾಬ್ದಾರಿ ಅನ್ಸುತ್ತೆ.
- ಎಲ್ರೂ ನಿನಗೆ ಹಾಗೇ ಅನ್ಸೋದು. - ಇಲ್ಲ.
ಇದು ಬೇರೆ.
ಅವನು ಎಲ್ಲಾದ್ರೂ ಬೀಳಬಹುದಿತ್ತು, ಆದರೆ ಇಲ್ಲಿ ಬಂದು ಬಿದ್ದ.
ಕೇಳೋಕೆ ವಿಚಿತ್ರ ಅನ್ನಿಸಿದರೂ ಅವನು ಮುಖ್ಯ ಅಂತ ನನಗ್ಯಾಕೋ ಅನ್ಸುತ್ತೆ.
ಇದೆಲ್ಲಾ ಆಗೋಕೆ ಏನೋ ಕಾರಣ ಇದ್ದ ಹಾಗೆ.
ನಾನೇ ಅವನನ್ನ ಕಂಡುಹಿಡಿಯಬೇಕಾದ ಹಾಗೆ. ನಾನು.
ನಾನು ಹಾಗೆ ಬಿಟ್ಟು ಹೋಗೋಕಾಗಲ್ಲ. ಅವನು ಸುರಕ್ಷಿತ ಅಂತ ತಿಳಿಯೋವರೆಗೂ.
ನೀನು?
ಸರಿ. ನಾನು ಯಾರಿಗೂ ಹೇಳಲ್ಲ.
ಧನ್ಯವಾದ.
ಒಬ್ಬ ದೈತ್ಯ ಏನು ತಿಂತಾನೆ ಅಂತ?
ಹಾರ್ಫೂಟ್ಸ್ ಆಗದೇ ಇದ್ದರೆ ಸಾಕು.
ರಹಸ್ಯ ಇಟ್ಕೊಳಕ್ಕೆ ಆಗದವರನ್ನ ಮಾತ್ರ.
ಭೂಮಿ ಬಿರುಕು ಬಿಟ್ಟುಕೊಂಡಿದೆ. ಭೂಕಂಪದಲ್ಲಿ ಆದಂಗೆ.
ಶವಗಳಿಲ್ಲ.
ಗಾಯಾಳುಗಳಿಲ್ಲ.
ಎಲ್ಲರೂ ಓಡಿ ಹೋದರೇನೋ.
ಇರಬಹುದು.
ಇದು ಕಿಯಾರನ್ ಮನೆಯಾಗಿತ್ತು.
ಮತ್ತು... ಹಾನಾ. ಅವನ ಹೆಂಡತಿ ಹೆಸರು ಹಾನಾ.
ಇದು ಭೂಕಂಪ ಅಲ್ಲ. ಯಾರೋ ದಾರಿ ಅಗೆದಿದ್ದಾರೆ.
ಏನೋ ಅಗೆದಿದೆ.
ಇದನ್ನ ಮನುಷ್ಯರು ಮಾಡಿಲ್ಲ.
ಹೋಗು. ನಿಮ್ಮವರನ್ನ ಎಚ್ಚರಿಸು.
ನೀನು ಜೊತೆಗೆ ಬರಲ್ವಾ?
ಈ ದಾರಿಯನ್ನೇ ಅನುಸರಿಸಿ ಹೋಗ್ಬೇಕು.
- ಅಲ್ಲೇನಿದೆ ನಿನಗೆ ಗೊತ್ತಿಲ್ಲ. - ಅದಕ್ಕೇ ನಾನು ಹೋಗ್ಬೇಕು.
ಎರೆಗಿಯೊನ್ ಎಲ್ವೆನ್ ಕುಶಲಕರ್ಮಿಗಳ ಸಾಮ್ರಾಜ್ಯ
ಫೆಯಾನೋರನ ಸುತ್ತಿಗೆ.
ಸಿಲ್ಮರಿಲ್ಸನ್ನ ಪಳಗಿಸಿದ ಆಯುಧ.
ವಾಲಿನೊರ್ನ ಬೆಳಕನ್ನು ಹಿಡಿದಿಟ್ಟುಕೊಂಡಿರುವ ಆಭರಣಗಳು.
ವಿಚಿತ್ರ, ಅಲ್ವಾ?
ಒಂದೇ ವಸ್ತು ಎಷ್ಟೆಲ್ಲಾ ಸೌಂದರ್ಯವನ್ನು ಸೃಷ್ಟಿಸಿದೆ...
ಜೊತೆಗೆ ನೋವನ್ನು ಕೂಡ.
ನಿಜವಾದ ಸೃಷ್ಟಿಗೆ ತ್ಯಾಗ ಬೇಕು.
ಮಾರ್ಗೋಥಿಗೆ ಸಿಲ್ಮರಿಲ್ಸ್ ಎಷ್ಟು ಅಂದವಾಗಿ ಕಂಡಿತಂದ್ರೆ
ಅವನ್ನ ಕದ್ದ ಮೇಲೆ ವಾರಗಳಷ್ಟು ಕಾಲ
ಅವುಗಳ ಆಳಕ್ಕೆ ನೋಡ್ತಾನೇ ಇದ್ದುಬಿಟ್ಟ.
ಅವನದೊಂದು ಕಂಬನಿ ಆಭರಣಗಳ ಮೇಲೆ ಬಿದ್ದಾಗ
ಮತ್ತು ತನ್ನದೇ ದುಷ್ಟತನದ ಪ್ರತಿಬಿಂಬವನ್ನು ನೋಡಿದಾಗಲೇ
ಅವನ ಸಂಭ್ರಮ ಮುರಿದಿದ್ದು.
ಆ ಕ್ಷಣದಿಂದ ಅವನು...
ಅವುಗಳ ಬೆಳಕಿನ ಕಡೆ ನೋಡಲೇ ಇಲ್ಲ.
ಫೆಯಾನೋರನ ಕೆಲಸ ಗ್ರೇಟ್ ಫೋನ ಹೃದಯವನ್ನೇ ಕರಗಿಸಿಬಿಡ್ತು.
ನಂದು ಏನನ್ನ ಸಾಧಿಸಿದೆ?
ನನ್ನ ಹೃದಯವನ್ನೂ ಕರಗಿಸಿದೆ, ಒಡೆಯ.
ಎಷ್ಟೋ ಎಲ್ಫ್ಗಳ ಹೃದಯವನ್ನ.
ಆದರೆ ಅದಕ್ಕಿಂತಲೂ ಹೆಚ್ಚು ಮಾಡೋ ಆಸೆ ನನಗೆ.
ಯುಗದ ಹಿಂದೆ ನಮ್ಮವರು ಈ ತೀರಗಳಿಗೆ ಯುದ್ಧವನ್ನು ತಂದರು.
ಅವರಿಗೆ ಸೌಂದರ್ಯವ ಕೊಡ್ಬೇಕು.
ಬರೀ ಆಭರಣ ಮಾಡ್ಕೊಂಡು ಇರೋ ಬದಲು ನೈಜ ಶಕ್ತಿ ಇರೋದನ್ನ ತಯಾರಿಸಬೇಕು.
ಏನನ್ನ ತಯಾರಿಸಬೇಕು ಅಂದುಕೊಂಡಿದ್ದೀರ?
"ಏನು" ಅನ್ನೋದೇ ಇನ್ನೂ ಮರೀಚಿಕೆಯಾಗಿದೆ.
"ಹೇಗೆ" ಸಾಧಿಸಬೇಕು ಅಂತ ನನಗೆ ನೆರವಾಗಲೆಂದೇ ನೀನು ಎರೆಗಿಯೊನಿಗೆ ಬಂದಿದ್ದೀಯ.
ಸ್ತಂಭವಾ?
ಹಿಂದೆಂದೂ ಕಟ್ಟಿರದಂಥ ತಡೆಗೋಡೆಯನ್ನ ನೋಡಿಕೊಳ್ಳಬಹುದು.
ಅಗ್ನಿಯ ನಾಲಗೆಯಷ್ಟು ಬಿಸಿಯ ಬೆಂಕಿಯನ್ನು ಸೃಷ್ಟಿಬಲ್ಲದು,
ನಕ್ಷತ್ರದ ಬೆಳಕಿನಷ್ಟೇ ಶುದ್ಧ.
ಇದನ್ನ ಉಪಯೋಗಿಸಿ ಮಿಡ್ಲ್ ಅರ್ಥ್ ಸ್ವರೂಪವನ್ನೇ ಬದಲಾಯಿಸಬಹುದು.
ಅದಕ್ಕೆ ಏನು ಕಷ್ಟ ಇದೆ?
ವಸಂತ ಕಾಲದೊಳಗೆ ಇದು ತಯಾರಿರಬೇಕು.
ದೊರೆ, ಅದಕ್ಕೆ ಹಿಂದೆಂದೂ...
ಸೇರಿಸಿರಲಾರದಂಥ ದೊಡ್ಡ ಸೈನ್ಯವೇ ಬೇಕು.
ಹೌದು. ಮೇಲರಸರಿಗೆ ಅದು ಮಾಡಲಾಗುವುದಿಲ್ಲ.
ಅದಕ್ಕೆ ನಿನ್ನನ್ನ ನನ್ನ ಬಳಿ ಕಳಿಸಿದ್ದಾರೆ.
ನಮ್ಮ ಜನಾಂಗದಾಚೆ ಜೊತೆಗಾರರನ್ನ ಹುಡುಕೋ ಆಲೋಚನೆ ಮಾಡಿದ್ದೀರಾ?
ಎಷ್ಟು ಆಚೆ?
ಎರೆಗಿಯೊನ್ ಎಲ್ವೆನ್ ಕುಶಲಕರ್ಮಿಗಳ ಸಾಮ್ರಾಜ್ಯ
ಖಜದ್-ದುಮ್ ಕುಬ್ಜರ ಸಾಮ್ರಾಜ್ಯ
ಕುಬ್ಜರ ಜೊತೆಗಿನ ಮೈತ್ರಿ ಈ ಯುಗದ ರಾಜತಾಂತ್ರಿಕ ಸಾಧನೆಯೇ ಆಗಲಿದೆ.
ಅವರ ರಾಜ ಡ್ಯುರಿನ್ ನನ್ನ ಹಳೆಯ ಆಪ್ತಮಿತ್ರ.
ನನ್ನ ಸಹೋದರನಂತೆ.
ಕುಬ್ಜರು ಇತ್ತೀಚಿಗೆ ತಮ್ಮ ಪಡಸಾಲೆಗಳನ್ನ ಇನ್ನೂ ವಿಶಾಲವಾಗಿಸಿಕೊಂಡಿದ್ದಾರಂತೆ.
ಅವರು... ಕಲ್ಲನ್ನು ಕೆತ್ತೋದು ಕೂಡ
ವಯಸ್ಸಾದ ಹಿರಿಯರನ್ನ ಗೌರವದಿಂದ ನೋಡಿಕೊಳ್ಳೋ ಹಾಗೆ.
ನನಗಂತೂ ಅವರ ಕೆಲಸ ನೋಡೋ ಆಸೆ ಬಹಳ ಕಾಲದಿಂದ ಇದೆ.
ಅವರನ್ನ ಇಷ್ಟೆಲ್ಲಾ ಅಭಿಮಾನಿಸ್ತೀರಾ?
ರಹಸ್ಯಗಳೊಳಗೆ ನೋಡಲು ಸಾಧ್ಯವಾಗುವ,
ಸರಳತೆಯಲ್ಲೇ ದೈವತ್ವ, ಮತ್ತದರ ಸೌಂದರ್ಯವನ್ನು
ಅರಸುವ ಎಲ್ಲರನ್ನೂ ಮೆಚ್ಚುತ್ತೇನೆ.
ನಿಮ್ಮ ಮಿತ್ರ ನನಗೆ ಅವರ ಕಾರ್ಯಗಾರಗಳೊಳಗೆ ಅವಕಾಶ ಕೊಡುತ್ತಾರಾ?
ಡ್ಯುರಿನ್ ಅದಕ್ಕಿಂತಲೂ ಉದಾರಿ.
ನಮ್ಮನ್ನು ಎರಡೂ ಕೈಗಳಿಂದ ಸ್ವಾಗತಿಸಿ,
ಕೊಂಬು, ಕಹಳೆಗಳು ಮೊಳಗುತ್ತಾ,
ಉಪ್ಪು ಹಚ್ಚಿದ ಮಾಂಸ ಇಟ್ಟ ಮೇಜುಗಳು,
ಮತ್ತು ಇಡೀ ಯಾಂಡುಯಿನ್ಗೇ ಸಾಕಾಗುವಷ್ಟು ಹೆಂಡ ಇರುತ್ತೆ.
ನಿನಗೇನು ಬೇಕು?
ನಾನು ಲಿಂಡೊನ್ನಿನ ಎಲ್ರೊಂಡ್,
ಜೊತೆಗೆ ಎರೆಗಿಯೊನ್ ದೊರೆ ಕೆಲಿಬ್ರೀಂಬೋರ್ ಇದ್ದಾರೆ.
ನಾವು ಯುವರಾಜ ಡ್ಯುರಿನ್ರನ್ನ ಕಾಣಬೇಕು.
ಇಲ್ಲ.
ಕ್ಷಮಿಸಿ.
ಡ್ಯುರಿನ್ ದೊರೆಗೆ ಅವರ ಮಿತ್ರ ಎಲ್ರೊಂಡ್...
ಅವರು ಈಗಾಗಲೇ ತೀರ್ಪು ಕೊಟ್ಟಾಗಿದೆ, ಎಲ್ಫ್.
ಕೊಂಬು ಕಹಳೆ?
ಆಗಲಿ, ಮಿತ್ರ.
ರೈಟ್ ಆಫ್ ಸಿಗಿನ್ ಟಾರಾಗನ್ನು ಆರಂಭಿಸುತ್ತೇನೆ.
ಏನಿದು ರೈಟ್ ಆಫ್...
ಎರೆಗಿಯೊನಲ್ಲಿ ಸಿಗ್ತೀನಿ.
- ಏನ್ಮಾಡ್ತಾ ಇದ್ದೀಯಾ ಗೊತ್ತಾ? - ಕೆಲಿಬ್ರೀಂಬೋರ್ ದೊರೆ, ನನ್ನ ನಂಬಿ.
ನಿಮ್ಮ ಕೌಶಲ್ಯದ ಪರಿಣಿತರು ನೀವೇ, ಮಿತ್ರ.
ನನ್ನ ಕೌಶಲ್ಯದ ಬಳಕೆಗೂ ಸ್ವಲ್ಪ ಅವಕಾಶ ಕೊಡಿ.
ಅದ್ಭುತ...
- ಖಜದ್! - ದುಮ್!
ನಿನ್ನ ನೋಡಿ ಸಂತೋಷ...
ಎಲ್ಫ್ ಎಲ್ರೊಂಡ್ ರೈಟ್ ಆಫ್ ಸಿಗಿನ್ ಟಾರಾಗನ್ನು ಆರಂಭಿಸಿದ್ದಾನೆ.
No comments yet. Be the first to leave one.