前 200 行。
ಹಿಂದಿನ ಸಂಚಿಕೆಯಲ್ಲಿ
ಅವನು ಸತ್ತಿದ್ದಾನೆ! ಬಾ!
ಏನು?
ಈಗ ಹೋಗುತ್ತೆ ನೋಡು...
ಎಲ್ಲಿಂದ ಬಂದಿದ್ದೀಯ, ಏನು?
ಆ ತಾರೆಗಳನ್ನ ಹುಡುಕಿಕೊಡೋಕೆ ಅವನಿಗೆ ನಮ್ಮ ಸಹಾಯ ಬೇಕು.
ನೋರಿ?
ಮಿಡ್ಲ್ ಅರ್ಥಿಗೆ ಹಿಂದಿರುಗೋದು ನನ್ನ ಕರ್ತವ್ಯ.
ನನ್ನ ಮನೆಯಿಂದ ನನ್ನನ್ನ ಓಡಿಸಿದ್ದು ಎಲ್ಫ್ಗಳಲ್ಲ. ಓರ್ಕ್ಗಳು.
ಅದು ನಿಮ್ಮ ಜನರ ಅರಸನ ಗುರುತಾ?
ನಮ್ಮ ಜನರಿಗೆ ರಾಜನಿಲ್ಲ.
ದೂರದ ಹೊರಪಾಳೆಯಗಳನ್ನು ವಿಸರ್ಜಿಸಲಾಗುತ್ತಿದೆ.
ಕೊನೆಯ ಸಲ ನೋಡ್ತಿದ್ದೀಯ?
ತುಂಬಾ ಬದಲಾಗಿದೆ, ವಾಚ್ ವಾರ್ಡನ್.
ಆದರೆ ಇಲ್ಲಿರುವವರು ಬದಲಾಗಿಲ್ಲ.
ಮಾರ್ಗೋಥಿನ ಜೊತೆ ನಿಂತವರ ರಕ್ತದಿಂದ ಅವರ ರಕ್ತ ಈಗಲೂ ಹೆಪ್ಪುಗಟ್ಟುತ್ತೆ.
- ಯಾರೋ ದಾರಿ ಅಗೆದಿದ್ದಾರೆ. - ಏನೋ ಅಗೆದಿದೆ. ಇದನ್ನ ಮನುಷ್ಯರು ಮಾಡಿಲ್ಲ.
ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್
ಮಾಡಿ ಬೇಗ.
ನೀನು! ಅವನನ್ನ ಕಟ್ಟಿಹಾಕು.
ಮಿಕ್ಕಿದವರ ಜೊತೆ ಆಚೆ ಬಿಸಾಕು.
ನೀನೇ ಅವನನ್ನ ಬಿಸಾಕು. ನನಗೆ ನೆನ್ನೆ ಬಿಸಿಲಿನ ಪಾಳಿ ಇತ್ತು.
ಅಡಾರ್ ಆಜ್ಞೆ ಕೊಟ್ಟರೆ ನೀನು ಇದ್ದಲಿನ ಹಾಗೆ ಕರ್ರಗಾಗುವರೆಗೂ ಬಿಸಿಲಲ್ಲೇ ಇರ್ತೀಯ.
ಅಡಾರ್ಗೋಸ್ಕರ ಮಾಡ್ತೀನಿ. ಆದರೆ ನಿನಗಲ್ಲ!
ಅಡಾರ್ಗೋಸ್ಕರ.
ವಿರಾಮ ಮುಗಿತು, ಸೋಮಾರಿ.
ಈಗ ಅಗೆ.
ಬದುಕಿದ್ದಾಳೆ.
ನಮ್ಮ ಅತಿಥೇಯರು. ರಕ್ಷಕರಾ, ಬಂಧಿಸುವವರಾ?
ಇದರಲ್ಲೇನು ವಿಷ ಇಲ್ಲ. ಅದೇ ನಿನ್ನ ಚಿಂತೆ ಆದರೆ.
ಮನುಷ್ಯರಿಗಂತೂ ಅಲ್ಲ ಬಿಡು.
ಎಲ್ಡಾರಿನವರು. ನನ್ನ ಹಡಗಲ್ಲಿ?
ಅಲೆಗಳು ವಿಚಿತ್ರವಾಗಿವೆಯಲ್ಲ.
ಯಾವ ದೋಣಿ ಇದು?
ಆರಾಮಾಗಿರು. ನಿನ್ನನ್ನ ಸುರಕ್ಷಿತವಾಗಿ ನನ್ನ ಮೇಲಿನವರ ಬಳಿ ತಲುಪಿಸಬೇಕು.
ನಿನ್ನ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಾರೆ.
ಯಾವ ಬಂದರಿಗೆ ನಮ್ಮ ಪಯಣ?
ನೀನೇ ನೋಡುವಂತೆ. ಇನ್ನೇನು ತಲುಪುತ್ತೇವೆ.
ಅಂದ್ರೆ ಎಷ್ಟು ದೂರ?
ಮನೆಗೆ.
ಯಾವ ಸ್ಥಳ ಇದು?
ಇದು ಆ ಸ್ಥಳ ಮಾತ್ರ ಆಗಿರಬಲ್ಲದು.
ನಕ್ಷತ್ರದ ನಾಡು.
ಮಾನವರ ಸ್ತರದಲ್ಲೇ ಅತ್ಯಂತ ಪಶ್ಚಿಮದಲ್ಲಿರುವುದು.
ನ್ಯೂಮೆನೊರಿನ ದ್ವೀಪರಾಜ್ಯ.
ಬಂದರಿನ ವೇಗ!
- ಅದು ಎಲ್ಫಾ? - ನನಗೇನು ಕಾಣಲಿಲ್ಲ...
ನನ್ನಂಥ ಮನುಷ್ಯರು ಇಂತ ರಾಜ್ಯಗಳನ್ನ ಯಾವಾಗ್ಲಿಂದ ಕಟ್ಟುತ್ತಿದ್ದಾರೆ?
ಆ ಜನ ನಿನ್ನ ಹಾಗಲ್ಲ.
ಮಹಾ ಯುದ್ಧದಲ್ಲಿ ನಿನ್ನ ಪೂರ್ವಜರು ಮಾರ್ಗೋಥ್ ಜೊತೆ ನಿಂತರು.
ಈ ಜನ ಎಲ್ಫ್ಗಳ ಜೊತೆ ನಿಂತರು.
ವಲಾರರು ಬಹುಮಾನವಾಗಿ ಅವರಿಗೆ ಈ ದ್ವೀಪವನ್ನು ಕೊಟ್ಟರು,
ಆದರೆ ಅದು ಆಗಿನಿಂದ ಬಹಳ ಬದಲಾಗಿದೆ.
ಹೊಟ್ಟೆಕಿಚ್ಚಿನ ವಾಸನೆ ಬರ್ತಿದೆಯಲ್ಲ?
ಹೊಟ್ಟೆಕಿಚ್ಚಲ್ಲ.
ದುಃಖ.
ಹಿಂದೆಲ್ಲಾ ಎಲ್ಫ್ಗಳು ಭಯವಿಲ್ಲದೆ ಈ ತೀರಗಳಿಗೆ ಬಂದು ಹೋಗುವವರು.
ನಮ್ಮ ಜನ ಅವರ ಕುಟುಂಬದ ಹಾಗಿದ್ದರು.
ಉಡುಗೊರೆಗಳು, ಜ್ಞಾನವನ್ನು ಹಂಚಿಕೊಳ್ತಿದ್ರು.
ಮತ್ತೆ ಏನಾಯ್ತು?
ನ್ಯೂಮೆನೊರ್ ನಮ್ಮ ಹಡಗುಗಳ ವಾಪಸ್ ಕಳಿಸಿದ.
ಕಾಲ ಕಳೆದಂತೆ ಸಂಪರ್ಕ ಮುರಿದುಕೊಂಡರು.
ಯಾಕೆ?
ನಮಗೀಗ ಗೊತ್ತಾಗಬಹುದು.
ಹೋಗ್ತಾ ಇರಿ.
ಜೊತೆಗಾರನಿಲ್ಲದೇ ಇಲ್ಲಿ ಕಳೆದುಹೋಗೋದು ಚಂದ ಅಲ್ಲ.
ಬೇರೆಯವುಗಳ ಜೊತೆ ಹಾಕಿ.
ತುಂಬಾ ಬಿಸಿ.
ತಾಳ್ಮೆ...
ನಾವು ನ್ಯೂಮೆನೊರಿನ ಪ್ರಜೆಗಳು.
ಸ್ವಲ್ಪ ಕಾಲ ಇತಿಹಾಸ ಬದಿಗಿಟ್ಟು ಕೊಂಚ ನಿಗ್ರಹ ತೋರೋಣ ಅಂತ ನನ್ನ ಅಭಿಪ್ರಾಯ.
ಈ ಜನರ ವಿರೋಧ ಕಟ್ಟಿಕೊಳ್ಳದಿರಲು ಯತ್ನಿಸೋಣ.
ನಾಯಕರೇ. ಮಹಾರಾಣಿ ರೀಜೆಂಟ್ ಕಾರ್ಯನಿರತರಾಗಿದ್ದಾರೆ.
ಚಾನ್ಸಲರ್ ಫರಝೋನ್ ಸಹ. ನನ್ನ ಮಾತು ಕೇಳಿ ನೀವು...
ಮಂಡಿಯೂರಿ.
ನ್ಯೂಮೆನೊರಲ್ಲಿ ಮಂಡಿಯೂರಲ್ಲ.
ಕ್ಷಮಿಸು.
ಮಾತಾಡು, ಎಲ್ಫ್.
ನಿನ್ನ ಹೆಸರು ಹೇಳು.
ನೊಲ್ಡೊರಿನ ಗಲಾಡ್ರಿಯಲ್.
ಗೋಲ್ಡನ್ ಹೌಸ್ ಆಫ್ ಫಿನಾರ್ಫಿನ್ನಿನ ಮಗಳು.
ಮೇಲರಸರಾದ ಗಿಲ್-ಗಾಲಾಡ್ ಅವರ ನೊರ್ಧರ್ನ್ ಅರ್ಮಿಸಿನ ಸೇನಾಧಿಪತಿ ನಾನು.
ಹಲ್ಬ್ರ್ಯಾಂಡ್.
ಸೌತ್ ಲ್ಯಾಂಡ್ಸಿಂದ.
ಮನುಷ್ಯ ಮತ್ತು ಎಲ್ಫ್, ಜೊತೆಯಲ್ಲಿ?
ಸಂದರ್ಭಗಳು ಹಾಗಿದ್ದವು.
ಅನಿವಾರ್ಯವಾಗಿ ಜೊತೆಯಾಗಬೇಕಾಯಿತು. ತೆರೆದ ಸಮುದ್ರದಲ್ಲಿ ಭೇಟಿಯಾದೆವು.
ನಿಮ್ಮ ಈ ನಾಯಕ ನಮ್ಮನ್ನ ಸಾವಿನಿಂದ ರಕ್ಷಿಸಿದರು.
ನಾವು ಕೇಳೋದೆಲ್ಲಾ ನ್ಯೂಮೆನೊರ್ ತಮ್ಮ ಕರುಣೆಯನ್ನು ಮುಂದುವರೆಸುತ್ತಾ
ಮಿಡ್ಲ್ ಅರ್ಥಿಗೆ ನಮ್ಮ ಹಡಗು ಹೋಗಲು ಅನುವು ಮಾಡಿ ಅಂತ.
ಒಬ್ಬ ಎಲ್ಫ್ಗಾಗಿ ನ್ಯೂಮೆನೊರಿನ ಹಡಗಿಗೆ ಈ ರೀತಿ
ಹೋಗಲು ಅವಕಾಶ ಮಾಡಿಕೊಟ್ಟು ಯುಗಗಳೇ ಕಳೆದಿವೆ.
ಎಲ್ಫ್ಗಳ ಕಾರಣದಿಂದಲೇ ನಿಮಗೆ ಈ ದ್ವೀಪವನ್ನು ಕೊಡಲಾಯಿತು.
ನಿಮ್ಮ ಬಳಿ ಖಂಡಿತ ಮರದ ಹಲಗೆಗಳು, ಚುಕ್ಕಾಣಿ ಇರಬಹುದು.
ನಮ್ಮ ಪೂರ್ವಜರಿಗೆ ಏನನ್ನೂ ಕೊಡಲಿಲ್ಲ.
ತಮ್ಮವರ ರಕ್ತದಿಂದ ಬೆಲೆ ಕಟ್ಟಿ ಈ ದ್ವೀಪವನ್ನು ಸಂಪಾದಿಸಿದರು.
ಎಲ್ಫ್ ಮಾತಿನ ಅರ್ಥ...
ಹೋಗಲು ರಕ್ತದಿಂದಲೇ ಬೆಲೆ ತೆರಬೇಕಂದ್ರೆ ನಾನು ಕೊಡ್ತೀನಿ.
ಹೇಗಾದರೂ ಸರಿ, ಹೋಗೇಹೋಗ್ತೀನಿ.
ಧಾರಾಳವಾಗಿ ಪ್ರಯತ್ನಿಸಿ.
ನಿಮ್ಮ ಧಾರಾಳತನ ನನಗೆ ಬೇಕಿಲ್ಲ.
ನೀವೂ ಅದನ್ನ ಬೇಗ ಕಳೆದುಕೊಳ್ತಿದ್ದೀರ.
- ಭಟರೇ! - ಗೆಳೆಯರೇ.
ನಾವು ಹೊರಡುವುದರಿಂದ ಕೆಲವು ತೊಂದರೆಗಳು ಎದುರಾಗಬಹುದು ಅಂತ ನನ್ನ ಅನಿಸಿಕೆ.
ಬಹುಶಃ ನಾವು ಇನ್ನೊಂದು ಸ್ವಲ್ಪ ಕಾಲ ಇದ್ದರೆ…
- ಇದ್ದರೇನಾ? - ಎಷ್ಟು ಕಾಲ ಅಂದರೆ, ಉದಾರಿ ರಾಣಿಯವರೇ,
ನಿಮಗೂ, ನಿಮ್ಮ ಸಲಹೆಗಾರರಿಗೂ ನಮ್ಮ ಮನವಿಯನ್ನು ಅವಲೋಕಿಸುವಷ್ಟು ಹೆಚ್ಚಿನ ಸಮಯ.
ಬಹುಶಃ ಕೆಲವು ದಿನಗಳು?
ಮೂರು ದಿನಗಳು. ಎಲ್ಫ್ ಮಾತ್ರ ಅರಮನೆ ಮೈದಾನದಲ್ಲೇ ಇರಬೇಕು.
ನಾನು ಬಂಧಿಯಾಗಿರಲ್ಲ.
ನನ್ನ ಕುದುರೆಯ ಕಾಲು ಮುರೀತೀನೇನೋ,
ಆದರೆ ನೊರ್ಧರ್ನ್ ಅರ್ಮಿಸಿನ ಬಲಶಾಲಿ ಸೇನಾಧಿಪತಿಯನ್ನ ಬಂಧಿಸುವುದಿಲ್ಲ.
ಹಾಗಾಗಿ, ನೀವು ನ್ಯೂಮೆನೊರಿನ ಅತಿಥಿ.
ನಾಯಕರೇ...
ನನ್ನ ವಂದನೆಗಳು.
"ಉದಾರಿ ರಾಣಿ"?
ಸೌತ್ ಲ್ಯಾಂಡ್ಸ್ ಇನ್ನೂ ಮೂರು ದಿನ ಇರುತ್ತೆ.
ಆದರೆ ಜನ ಇರ್ತಾರಾ?
ನೋಡು ನಿನ್ನ ಸುತ್ತ. ಇದೊಂದು ಸ್ವರ್ಗ.
ಅವಕಾಶಭರಿತವಾಗಿದೆ.
ನಿನ್ನ ಜೊತೆ ನಾನು ಕುಲುಮೆಗೆ ಹಾರಬೇಕೇನು?
ಒಂದು ಜೀವ ಉಳಿಸೋಕೆ ಸಮುದ್ರಕ್ಕೆ ಹಾರಿದೆ ನೀನು.
ನನಗೆಷ್ಟೋ ಜೀವಗಳ ಉಳಿಸಬೇಕು.
ನಿನಗೆ ಗೊತ್ತಿರದಷ್ಟು ಕಾಲದಿಂದ ನಾನು ಶಾಂತಿಯನ್ನ ಅರಸುತ್ತಿದ್ದೇನೆ.
ದಯವಿಟ್ಟು, ನಮ್ಮಿಬ್ಬರ ಸಲುವಾಗಿ, ಅದು ನನ್ನಲ್ಲುಳಿಯಲಿ.
ಸ್ವಲ್ಪ ಶಾಂತಿಯಿದ್ದರೆ ನಿನಗೂ ಒಳ್ಳೆಯದೇನೋ.
ಕನಿಷ್ಠ ಪಕ್ಷ...
ಹೊಸ ಶತ್ರುಗಳನ್ನಾದರೂ ಮಾಡಿಕೊಳ್ಳದೆ ಇರು.
ಈ ವಿಷಯ ಆದಷ್ಟೂ ಬೇಗ ಇತ್ಯರ್ಥವಾದರೆ ಒಳ್ಳೆಯದು.
ಅವಳು ಅಂತಿಂಥ ಎಲ್ಫ್ ಅಲ್ಲ.
ಬೆಟ್ಟ ಕುಸಿಯೋಕೆ ಒಂದು ಕಲ್ಲು ಸಾಕು.
ನಿಮ್ಮ ತಂದೆಯ ಯುದ್ಧದ ಕಾರ್ಮೋಡ ಕವಿಯೋಕೆ ಬಿಡೋದು ಬೇಡ.
ಈ ನಾಯಕನ ಬಗ್ಗೆ ಹೇಳು.
ಅವನ ಹೆಸರು ಎಲೆಂಡಿಲ್.
ಅವನು ರಾಜವಂಶಸ್ಥನಾಗಿದ್ದು, ಈಗ ತನ್ನ ಮಗನ ಜೊತೆ ನೌಕಾ ಯೋಧನಾಗಿದ್ದಾನೆ,
ನನಗೆ ನೆನಪಿದ್ದಂತೆ ಅವನೂ ತಂದೆಯ ಹಾದಿಯನ್ನೇ ಹಿಡಿದಿರಬಹುದು.
ಎಳೆಯಿರಿ!
ಒಟ್ಟಾಗಿ ಈಗ!
ಎಳೆಯಿರಿ!
ನನ್ನ ಕೆಳಗೆ ಕೆಲಸ ಮಾಡಬೇಕಾದರೆ ಅದಕ್ಕಿಂತ ಬೇಗ ಆ ಹಾಯಿಯನ್ನ ಎಸೆಯಬೇಕು!
ಬನ್ನಿರಿ, ಸೈನಿಕರಾ!
ಒಟ್ಟಾಗಿ ಈಗ!
ಇಸಿಲ್ದೂರ್...
ಇಸಿಲ್ದೂರ್!
ಇಸಿಲ್ದೂರ್!
ಸೀ ಗಾರ್ಡಲ್ಲಿ ಸ್ಥಾನ ಪಡೆಯುವ ಯಾವುದೇ ಯೋಧ
ನ್ಯೂಮೆನೊರಿನ ರಕ್ಷಕನಷ್ಟೇ ಆಗಿರಲ್ಲ.
ಅದಲ್ಲ!
ಇಮ್ರಾಹಿಲ್!
ಬಂದರ ಕಡೆಗೆ! ಬಂದರ ಕಡೆಗೆ ಹಾಕಿರಿ!
ವಲಂಡೀಲ್! ಒಂಟಮೋ!
ನೆರವಾಗಿ! ಎಳೀರಿ!
ಸಮನ್ವಯ, ಯೋಧರೇ! ಮತ್ತೆ ಅಲ್ಲಿಗೆ!
ಸಮುದ್ರಕ್ಕಿಂತ ಕಠಿಣವಾದ ಯಜಮಾನ ಯಾರೂ ಇಲ್ಲ.
ಯಾವಾಗಲೂ ಸಮುದ್ರವೇ ಸರಿ!
ಯಾವಾಗಲೂ ಸಮುದ್ರವೇ ಸರಿ!
ಪಾಪ ಇಮ್ರಾಹಿಲ್.
ಅವನ ತಂದೆ ಮನೆಯಿಂದ ಒದ್ದು ಓಡಿಸ್ತಾರೆ ಅಷ್ಟೇ.
ಇಸಿಲ್ ಅವನ ಜೊತೆ ಹೋಗದೇ ಇರೋದು ಅದೃಷ್ಟ.
ನಾನಾ?
ನಿನ್ನ ಮನಸ್ಸೆಲ್ಲಾ ಆ ದರಿದ್ರ ಮೋಡಗಳಲ್ಲೇ ಇತ್ತು ಇವತ್ತು. ಏನದು?
ಅಲ್ಲಿ ಹೋಗೋಕೆ ಆಸೆ ಅಷ್ಟೇ. ಇನ್ನೇನಿಲ್ಲ.
ಇನ್ನು ಒಂಭತ್ತು ದಿನಗಳು. ಒಂಭತ್ತೇ ದಿನಗಳು!
ಸಮುದ್ರ ಪರೀಕ್ಷೆ ಉತ್ತೀರ್ಣವಾದ ನಾಲ್ಕು ವರ್ಷಕ್ಕೆ ಅಧಿಕಾರಿಗಳಾಗಬಹುದು.
ಹತ್ತು ವರ್ಷಗಳಲ್ಲಿ ಅಧಿಪತಿಗಳಾಗಬಹುದು.
- ನನಗೇನೋ ಎಂಟು. - ಬಹುಶಃ ಹದಿನೆಂಟು.
ಇಸಿಲ್ದೂರ್! ನಿನ್ನ ಸಹೋದರಿ ಬಂದಿದ್ದಾಳೆ.
ಇಲ್ಲಿದ್ದೀಯಾ.
ಬೆರೆಕ್, ನನ್ನ ಪುಟ್ಟ.
ಚಿತ್ರಪುಸ್ತಕ ಬಿಟ್ಟು ಬಂದಿರುವುದಾರು ನೋಡಿ.
ನನ್ನನ್ನ ನೋಡೋಕೆ ಅಂತ ಇಷ್ಟು ದೂರ ಬರಬೇಕಿರಲಿಲ್ಲ ನೀನು.
- ಇಸಿಲ್, ಕ್ಯಾಂಟೀನಾ? - ಇಲ್ಲ, ನೀನು ಹೋಗು.
ಆಮೇಲೆ ಬಂದು ಸಿಗು. ನಿಮ್ಮಣ್ಣನ ಹಾಗೆ ಇರಬೇಡ.
ಮುದುಕಿಯಾಗಿರೋಕೆ ಇಡೀ ಜೀವನವೇ ಇದೆ.
ಯುವತಿಯಾಗಿರೋಕೂ ಸಹ.
ನೀನಿಲ್ಲೇನು ಮಾಡ್ತಿದ್ದೀಯಾ? ಅಪ್ಪ ಎಲ್ಲಿ?
ನಂಬಿಕಸ್ಥರ ಪ್ರಕಾರ ವೈಟ್ ಟ್ರೀಯ ದಳಗಳು ಉದುರುತ್ತಿವೆ ಅಂದರೆ
ಅದು ಸಾಮಾನ್ಯ ವಿಷಯವಲ್ಲ...
ಸ್ವತಃ ವಲಾರರ ಕಣ್ಣೀರೇ,
ಅವರ ಕಣ್ಣುಗಳು ಮತ್ತು ತೀರ್ಪು ನಮ್ಮ ಮೇಲೆ
ಸದಾ ಕಾಲ ಇದೆ ಅನ್ನುವುದರ ಜೀವಂತ ಸಾಕ್ಷಿ.
ನೀನದನ್ನ ನಂಬುತ್ತೀಯಾ?
ನನ್ನ ಅನುಭವದಲ್ಲಿ, ಸಂಜ್ಞೆಗಳು ಮತ್ತು ಶಕುನಗಳನ್ನ
ಊಹಿಸಿಕೊಂಡು ಬದುಕುವುದು ಬುದ್ಧಿವಂತಿಕೆ ಅಲ್ಲ.
"ಎಲೆಂಡಿಲ್." ವಿಲಕ್ಷಣವಾದ ಹೆಸರು.
ನಮ್ಮ ಪಶ್ಚಿಮದ ತೀರಗಳಿಂದ, ಅಲ್ವಾ?
ಅದರ ಮೂಲ ಅಲ್ಲಿನದೇ.
ದಯವಿಟ್ಟು ಅದರ ಅರ್ಥ ಹೇಳ್ತೀಯಾ?
ನಕ್ಷತ್ರಗಳ ಪ್ರೇಮಿ ಅಂತ.
ಇದು ಮಾತ್ರ ಅದರ ಭಾಷಾಂತರ ಅಲ್ಲ ತಾನೇ?
ಎಲ್ದಾರಿನ ಪುರಾತನ ಭಾಷೆಯಲ್ಲಿ
ಅದರ ಅರ್ಥ "ಎಲ್ಫ್-ಮಿತ್ರ" ಅಂತ.
ಮತ್ತೆ ನೀನು? ಎಲ್ಫ್-ಮಿತ್ರನಾ?
ನಾನು ನ್ಯೂಮೆನೊರಿನ ನಿಯತ್ತಿನ ಸೇವಕ.
ಆದರೂ, ನಮ್ಮ ತಾತನ ಮುತ್ತಾತನ ಆಳ್ವಿಕೆಯ ಕಾಲದಿಂದಲೂ
ನಮ್ಮ ತೀರಗಳಲ್ಲಿ ಎಲ್ಫ್ಗಳಿಗೆ ಸ್ವಾಗತ ಇಲ್ಲ,
ನೀನು ಆ ಸಂಪ್ರದಾಯವನ್ನು ಮುರಿಯಲು ನಿರ್ಧರಿಸಿದೆ. ಯಾಕೆ?
ಸಮುದ್ರವೇ ಅವಳನ್ನು ನನ್ನ ದಾರಿಗೆ ತಂದಿರಿಸಿತು.
ಹಾಗೂ ಸಮುದ್ರ ಯಾವಾಗಲೂ ಸರಿಯೇ.
ಸಮುದ್ರಕ್ಕೆ ದ್ರೋಹ ಬಗೆಯೋದು ಗೊತ್ತಿಲ್ಲ.
No comments yet. Be the first to leave one.