Blood Diamond

Blood Diamond

Download Kannada Subtitle

Release info

Blood Diamond (2006)
A Commentary by VikasHegde
.ass file: ಕನ್ನಡ ಸಂಭಾಷಣೆಗಳು (ಸಬ್ ಟೈಟಲ್ಸ್)

Tags

other
Published on: 2018-04-03
Downloads: 53
Hearing Impaired: No

Kannada subtitle preview

The first 200 lines.

ದಿಯಾ.

ಇಂಗ್ಲೀಶ್ ಹುಡುಗರು ದಿನಾ ಶಾಲೆಗೆ ಹೋಗಲ್ಲ.

ಈ ದೇಶ ಆದರ್ಶರಾಷ್ಟ್ರದ ಕಲ್ಪನೆಯಲ್ಲಿ ಹುಟ್ಟಿದ್ದು ಅಂತ ಟೀಚರ್ ಹೇಳ್ತಾರೆ

ಹಾಗಂದ್ರೆ ಏನು ಅಂತ ನಿನಗೆ ಗೊತ್ತಾ, ಅಪ್ಪಾ?

ಅವರು ಹೇಳ್ತಾರೆ, ಒಂದು ದಿನ ಈ ಯುದ್ಧ ಎಲ್ಲಾ ಮುಗಿದಾಗ.....

.... ನಮ್ಮ ಜಗತ್ತು ಸ್ವರ್ಗವಾಗುತ್ತದೆ ಅಂತ.

ಇದೆಲ್ಲಾ ಒಂದೇ ದಿನದಲ್ಲಿ ಕಲಿತೆಯಾ?

ಗಣಿತ ಮತ್ತು ವಿಜ್ಞಾನ ಕೂಡ.

ಇದೆಲ್ಲಾ ಕಲಿತಿದ್ದು ಜಾಸ್ತಿಯಾಯಿತು. ನಾಳೆ, ನೀನು ಮನೆಯಲ್ಲೇ ಇದ್ದು ಬಲೆ ದುರಸ್ತಿಮಾಡು, ಗೊತ್ತಾಯ್ತಾ?

ಇಲ್ಲ, ಅಪ್ಪ.

ಏನು? ಅಂದ್ರೆ ನಿನಗೆ ಈಗ ದಿನಾಲೂ ಶಾಲೆಗೆ ಹೋಗ್ಬೇಕು ಅಂತ ಆಸೆಯಾ?

-ಇರು -ಅಪ್ಪಾ.

- ಇರು! - ಅಪ್ಪಾ.

ಜ್ಯಾಸ್ಸೀ!

ಸೊಲೊಮನ್

ಬಾ, ಬಾ, ಬಾ,

ಎತ್ಕೋ ಅದನ್ನ, ಬೇಗ.

ಅಪ್ಪ! ಅಪ್ಪ! -ಜ್ಯಾಸ್ಸೀ.

-ದಿಯಾ, ಓಡು! - ಅಪ್ಪ!

- ಅಪ್ಪ! ಅಪ್ಪ! - ದಿಯಾ, ಓಡು!

ಅಪ್ಪ!

ಇನ್ನೊಬ್ಬನ್ನ ತಂದುಹಾಕು, ಸೂಳೆಮಗನೆ.

ಇನ್ನೊಬ್ಬನ್ನ ತಂದುಹಾಕು,

- ಉದ್ದ ತೋಳಾ, ಗಿಡ್ಡ ತೋಳಾ? - ಬೇಡ.

ಮರಿ, ನೀನು ತಿಳ್ಕಬೇಕು.

ಸರ್ಕಾರ ನೀನು ಓಟ್ ಹಾಕಲಿ ಅಂತ ಬಯಸ್ತದೆ, ಗೊತ್ತಾಯ್ತಾ?

ಅವರು ನಿಮಗೆ ಹೇಳ್ತಾರೆ, "ಭವಿಷ್ಯ ನಿಮ್ಮ ಕೈಯಲ್ಲಿದೆ" ಅಂತ

ನಾವೇ ಈಗಿನ ಭವಿಷ್ಯ.

ಅದಕ್ಕೆ ನಾವು ನಿಮ್ಮ ಕೈಗಳನ್ನೇ ತಗೊತೇವೆ.

- ಬೇಡ. - ಕೈಗಳೂ ಇಲ್ಲ, ಓಟ್ ಹಾಕೋದೂ ಇಲ್ಲ.

ಕತ್ತರಿಸು.

ಎಲ್ಲರಿಗೂ ಹೇಳಿ ದ ರೆವೊಲ್ಯೂಷನರಿ ಯುನೈಟೆಡ್ ಫ್ರಂಟ್ ಬರ್ತಾ ಇದೆ.

- RUF! - RUF! RUF!

ಇನ್ನೊಬ್ಬನ್ನ ತಂದು ಹಾಕಿ. ಮುಂದೆ ತನ್ನಿ ಅವನನ್ನ. ಮುಂದೆ ತನ್ನಿ.

ಉದ್ದ ತೋಳಾ, ಗಿಡ್ಡ ತೋಳಾ?

- ಗಿಡ್ಡ ತೋಳು! - ಕತ್ತರಿಸು.

ಇರು, ಇರು, ತಡಿ, ತಡಿ

ಇವ್ನು ಬೇಡ. ನೋಡಿ ಇವನನ್ನ.

- ಟ್ರಕ್‍ಗೆ ತುಂಬಿ ಇವನನ್ನ - ಹೋಗೋಣ

ಅವನನ್ನ ಗಣಿಗೆ ತನ್ನಿ.

ಅವನು ಕೆಲಸ ಮಾಡ್ಬೋದು, ಅವನು ಕೆಲಸ ಮಾಡ್ಬೋದು. ನಡಿರಿ, ನಡಿರಿ, ನಡಿರಿ.

ಮುಂದೆ, ಮುಂದೆ, ಮುಂದೆ

ಆಫ್ರಿಕಾದ ಇತಿಹಾಸದಲ್ಲಿ...

....ಬೆಲೆಬಾಳುವ ವಸ್ತುಗಳು ಸಿಕ್ಕಾಗಲೆಲ್ಲಾ......

... ಸ್ಥಳೀಯ ಜನರು ದೊಡ್ಡ ಸಂಖ್ಯೆಯಲ್ಲಿ ಸಾಯ್ತಾರೆ, ಇದು ದುರಂತ.

ದಂತ, ರಬ್ಬರ್, ಚಿನ್ನ ಮತ್ತು ತೈಲದ ವಿಷಯದಲ್ಲಿ ಇದು ನಿಜವಾಗಿದೆ.

ಈಗ ವಜ್ರಗಳ ವಿಷಯದಲ್ಲೂ ಆಗ್ತಾ ಇದೆ.

ಗ್ಲೋಬಲ್ ವಿಟ್ನೆಸ್ ನ ಒಂದು ಆಘಾತಕಾರಿ ವರದಿಯ ಪ್ರಕಾರ

...ಈ ವಜ್ರಗಳು ಶಸ್ತ್ರಾಸ್ತಗಳ ಖರೀದಿಗೆ ಮತ್ತು ಅಂತರ್ಯುದ್ಧಗಳಿಗೆ ಹಣಕಾಸು ಒದಗಿಸಲು ಬಳಕೆಯಾಗ್ತಿವೆ

ವಿವಾದದಲ್ಲಿರುವ ಪ್ರದೇಶಗಳಿಂದ...

....ಎಲ್ಲಾ ಕಚ್ಛಾ ವಜ್ರಗಳ ನೇರ ಅಥವಾ ಪರೋಕ್ಷ ಆಮದನ್ನು ನಿಲ್ಲಿಸಲು ನಾವು ಕೆಲಸಮಾಡಬೇಕಿದೆ.

ನಿಮಗೆ ನೆನಪಿರಲಿ...

ಒಟ್ಟಾರೆ ಜಗತ್ತಿನ ವಜ್ರ ಖರೀದಿಯ ಎರಡನೇ ಮೂರು ಭಾಗಕ್ಕೆ ಯು.ಎಸ್. ದೇಶವೇ ಕಾರಣ...

... ಹಾಗೂ ಆ ಬೇಡಿಕೆ ಕಡಿಮೆಯಾಗುತ್ತಿದೆ ಅಂತೇನೂ ನನಗೆ ಅನ್ನಿಸೋದಿಲ್ಲ

ನಾವೆಲ್ಲರೂ ನೆನಪಿಟ್ಕೋಬೇಕು. ಈ ವಜ್ರಗಳು...

ಜಗತ್ತಿನ ಸಕ್ರಮ ವಜ್ರಕೈಗಾರಿಕೆಯ ಸಣ್ಣ ಭಾಗ ಮಾತ್ರ...

... ಈ ವ್ಯಾಪಾರ ಹಲವು ಉದಯೋನ್ಮುಖ ದೇಶಗಳ ಆರ್ಥಿಕತೆಗಳಿಗೆ ಮುಖ್ಯವಾದುದು.

ಫ್ರೀಟೌನ್ ಸರಕಾರ ಮತ್ತು ಅವರ ಬಿಳಿಯ ದೊರೆಗಳು...

...ಅವರ ದುರಾಸೆಗಳಿಗೋಸ್ಕರ ನಿಮ್ಮ ಭೂಮಿಯನ್ನು ಬಲಾತ್ಕಾರ ಮಾಡಿದ್ದಾರೆ.

RUF ನಿಮ್ಮನ್ನು ಮುಕ್ತಿಗೊಳಿಸಿದೆ.

-ಇಲ್ಲಿ ಯಾರೂ ಗುಲಾಮ - ದೊರೆ ಅಲ್ಲ. - ಇದು ನಿಜ

ಈಗಿನ ಅಂದಾಜಿನ ಪ್ರಕಾರ ವಿವಾದಿತ ವಜ್ರಗಳು ಒಟ್ಟಾರೆ ಮಾರುಕಟ್ಟೆಯ ಶೇಕಡಾ ೧೫ ಭಾಗದಷ್ಟು ಮಾತ್ರ

ಆದರೆ ಅದು ವರ್ಷಕ್ಕೆ ಅನೇಕ ಶತಕೋಟಿ ಡಾಲರುಗಳ ವಹಿವಾಟಿನ ಕೈಗಾರಿಕೆ...

....ಅಂದರೆ ಅದರರ್ಥ, ನೂರಾರು ಮಿಲಿಯನ್ ಡಾಲರುಗಳು

...ಸಂಘರ್ಷದ ವಲಯಗಳಲ್ಲಿ ಶಸ್ತ್ರಾಸ್ತ್ರಗಳಿಗೆ ಬಳಕೆಯಾಗ್ತಿವೆ.

RUF ಜನರಿಗೋಸ್ಕರ ಹೋರಾಡ್ತಿದೆ!

RUF ಸಿಯೆರ್ರಾ ಲಿಯೋನ್‍ಗೋಸ್ಕರ ಹೋರಾಡ್ತಿದೆ!

ಯಾವನಾದ್ರೂ ಸೂಳೆಮಗ ನನ್ನ ಬಳಿ ವಜ್ರದ ವಿಷಯದಲ್ಲಿ ಆಟವಾಡಲು ಬಂದ್ರೆ, ಅವನ ಕತ್ತು ಸೀಳಿಬಿಡ್ತೀನಿ.

ನಿಲ್ಸಿ!

ಇವತ್ತು ಆ ವಜ್ರ ಕೈಗಾರಿಕೆಗಳ ಸದಸ್ಯರಿಂದಾಗಿ ನಾವೆಲ್ಲಾ ಇಲ್ಲಿ ಸೇರಿದ್ದೇವೆ...

...ಅವರು ತುಂಬುಹೃದಯದಿಂದ ನಿಮ್ಮ ಪ್ರಸ್ತಾವನೆಯನ್ನು ಅನುಮೋದಿಸುತ್ತಾರೆ.

ಇಲ್ಲಿ ಉಪಸ್ಥಿತರಿರುವ ಅವರಿಗೆ ನಮ್ಮೆಲ್ಲರ ಚಪ್ಪಾಳೆ.

ಮಿಸ್ಟರ್. ವಾನ್ ಡೆ ಕಾಪ್ ಮತ್ತು ಮಿಸ್ಟರ್. ಸಿಮ್ಮೋನ್ಸ್.

ಕೊಡಿಲ್ಲಿ ಅದನ್ನ.

ಚಿಂತಿಸಬೇಡ. ನಮಗೇನೂ ತೊಂದರೆಯಾಗಲ್ಲ,

ಕೇಳಿಲ್ಲಿ, ನಾನು ಹೊರಹೋದ ತಕ್ಷಣ ನೀನು ಹೊರಟುಬಿಡು.

ನಾನು ಸೆಟಲೈಟ್ ಫೋನ್ ಮೂಲಕ ಕರೆಯುವವರೆಗೆ ನೀನು ವಿಮಾನ ಕೆಳಗಿಳಿಸಬೇಡ.

ನೀನು ಜೋಪಾನ, ಡ್ಯಾನಿ.

ಚಿಂತಿಸಬೇಡ. ಅವರಿಗೆ ಮೂರ್ಖ ಕೆಲಸಗಳನ್ನ ಮಾಡಕ್ಕೆ ಈ ಗನ್ನುಗಳ ಅಗತ್ಯ ಬಹಳ ಇದೆ.

ಕಮಾಂಡರ್ ಝೀರೋ ಎಲ್ಲಿ?

ನಾನು ಕ್ಯಾಪ್ಟನ್ ರ್‍ಯಾಂಬೋ.

ಸರಿ, ಸರಿ, ನಾನು ನಿನ್ನ ಸಿನೆಮಾಗಳನ್ನ ನೋಡಿದಿನಿ, ಅಲ್ವಾ?

ನಾನು ಕಮಾಂಡರ್ ಝೀರೋನ ಹುಡುಕ್ತಾ ಇದ್ದೀನಿ.

ಅವರು ಒಳಗಿದ್ದಾರೆ. ನನ್ ಜೊತೆ ಮಾತಾಡು.

ಸರ್ಕಾರದ ವಿರುದ್ಧದ ಹೋರಾಟದಲ್ಲಿ ನಮಗೆ ಸಹಾಯ ಮಾಡಕ್ಕೆ ನೀನು ಇಲ್ಲಿದ್ದೀಯ.

ನಾನಿಲ್ಲಿ ಕಮಾಂಡರ್ ಝೀರೋ ಜೊತೆ ವ್ಯವಹಾರ ಮಾಡಕ್ಕೋಸ್ಕರ ಬಂದಿದ್ದೇನೆ, ಆಯ್ತಾ?

ಸರಿಬಿಡು.

ನೀನೇನಾ ಗಂಡು? ಹಾ? ನೀನೇನಾ ಗಂಡು?

ನೋಡಿಲ್ಲಿ.

ಹೇಯ್. ನಾನು ನಿನ್ ಜೊತೆಗೇ ಮಾತಾಡ್ತಿರೋದು! ನಿಲ್ಲು!

- ಕಮಾಂಡರ್ ಝೀರೋ. - ಹೇಯ್

- ನಾನು ನಿನ್ನ ಸಾಯಿಸಿಬಿಡ್ತೇನೆ, ಹಾಂ? - ಪರ್ವಾಗಿಲ್ಲ, ಹಾಂ? ಪರ್ವಾಗಿಲ್ಲ.

ಕಮಾಂಡರ್ ಝೀರೋ. ಕಮಾಂಡರ್ ಝೀರೋ

ಮಿಸ್ಟರ್ ಆರ್ಚರ್, ಬಾ ಇಲ್ಲಿ.

ನಂಗೋಸ್ಕರ ಏನಾದ್ರೂ ತಂದಿದ್ದೀಯಾ?

ನೀನು ನನಗೆ ಏನು ಕೊಡ್ತಿಯಾ?

ನಿನಗೇನು ತಿಕ್ಕಲಾ? ಮೊದಲು ನೀನು ಹಣ ಕೊಡಬೇಕು.

ಇದು ಸರಿಯಲ್ಲ, ಹಾ?

ಇದು ಚೆನಾಗಿರಲ್ಲ

...ಹಾಗಿದ್ರೆ ನೀವು ಆ ಸರ್ಕಾರಿ ಪಡೆಗಳ ಮತ್ತು ಅವರ ಆಧುನಿಕ ಶಸ್ತ್ರಾಸ್ತ್ರಗಳ ವಿರುದ್ಧ ಅದೇ ಹಳೇ ಎ.ಕೆ. ಗನ್ ಹಿಡಿದು ಹೋರಾಡಿ, ಹಾ?

ನಾನು ನಿನ್ನ ಸಾಯಿಸಿ ನೀನು ತಂದಿರೋದನ್ನೆಲ್ಲಾ ತಗೊಬಹುದು.

ಹಾಗೇನಾದ್ರೂ ಮಾಡಿದರೆ ನಿನಗೆ ಸಿಗೋದು ಇನ್ನೊಂದು ಹೆಣ ಮಾತ್ರ...

.... ಗ್ರೆನೇಡ್‍ ಲಾಂಚರ್‍ ಗಳನ್ನ ತುಂಬಿಕೊಂಡು ಬರುತ್ತಿರೋ ವಿಮಾನದ ಬದಲು.

ನಾನು ಆ ಸರ್ಕಾರದವರ ಬಳಿಗೇ ಹೋಗಲಾ ಅಂತ ಯೋಚಿಸ್ತಾ ಇದ್ದೀನಿ.

ಅವರು, ಕೊನೇಪಕ್ಷ ನನಗೆ ದುಡ್ಡಾದ್ರೂ ಕೊಡ್ತಾರೆ.

ಇರು, ಇರು, ಇರು, ಗುರುವೇ.

ನಿನಗೆ ಬೇಕಾಗಿರೋದು ಇದೇ ಅಲ್ವಾ? ತಗೋ.

ಇಷ್ಟೆಲ್ಲಾ ಇಟ್ಕೊಂಡು ನಾನು ಏನ್ ಮಾಡ್ಲಿ ಗೊತ್ತಿಲ್ಲ.

ಹೇಯ್, ಆರ್ಚರ್, ಮುಂದಿನ ಸಲ ಸೆಟಲೈಟ್ ಟೀವಿ ತಗೊಂಡುಬಾ, ಆಯ್ತಾ?

- ನಾನು ಬೇವಾಚ್ ನೋಡ್ಬೇಕು. - ಸರಿ.

ಆಯ್ತು... ಆಯ್ತು....

ಹಲೊ. ಹಲೊ. ಹಲೊ

ದಾಖಲೆ ಪತ್ರ ಕೊಡಿ.

ಡ್ಯಾನಿ ಆರ್ಚರ್, ನ್ಯಾಶನಲ್ ಜಿಯೋಗ್ರಾಫಿಕ್

ನೀವು ಲೈಬೀರಿಯಾ ಗಡಿಯೊಳಗೆ ಬರ್ತಿದ್ದೀರ.

ನನ್ನ ಹತ್ರ ಗೃಹಮಂತ್ರಿಗಳ ಪತ್ರ, ಮತ್ತು ಲೈಬೀರಿಯನ್ ವೀಸಾ ಕೂಡ ಇದೆ.

ನಾನು 'ಮರ್ರಾಕಾಜ್' ಬಗ್ಗೆ ಒಂದು ಕತೆ ಮಾಡ್ತಾ ಇದ್ದೇನೆ...

....ಹಾಗಾಗಿ ನಾವು ಗಡಿ ದಾಟಿ ಹುಲ್ಲುಗಾವಲುಗಳಿಗೆ ಹೋಗಲು ಅನುಮತಿ ಇರುತ್ತದೆ.

ನೀನು ಎಂದಾದ್ರೂ ನ್ಯಾಶನಲ್ ಜಿಯೋಗ್ರಫಿಕ್ ಓದಿದ್ದೀಯಾ?

- ನಿನ್ನನ್ನ ಅರೆಸ್ಟ್ ಮಾಡ್ತಾ ಇದ್ದೇವೆ. ಸ್ಮಗ್ಲಿಂಗ್ ಮಾಡಿದ್ದಕ್ಕಾಗಿ. - ಇಲ್ಲ, ಇಲ್ಲ, ಇಲ್ಲ.

ಕೇಳಿಲ್ಲಿ, ಗೆಳೆಯ. ಕೇಳಿಲ್ಲಿ, ಆಯ್ತಾ?

ನಾನೂ, ಕರ್ನಲ್ ಕೊಟ್ಜೀಯೆ ಒಳ್ಳೇ ಗೆಳೆಯರು.

ನೀವು ಈ ವಿಷಯಕ್ಕೆ ಬಂದಿದ್ದೀರಿ ಅಂತ ಗೊತ್ತಾದ್ರೆ ಕರ್ನಲ್ ಕೊಟ್ಜೀಯೆ ಸುಮ್ನಿರಲ್ಲ.

ಈಗ, ನಾನ್ಯಾರು ಅಂತ ನಿಮಗೆ ಗೊತ್ತಾಗಿದೆ ಅನ್ಕೊತಿನಿ, ಸರಿನಾ?

ನೀವು ನನಗೆ ಅಥವಾ ನನ್ನ ಜೊತೆ ಇರೋರಿಗೆ ಯಾವ ತೊಂದರೇನೂ ಮಾಡ್ಬಾರ್ದು, ಆಯ್ತಾ?

ಇದನ್ನು ಇನ್ನೊಂದು ತರ ಪರಿಹರಿಸಿಕೊಳ್ಳೋಣ, ಸರಿನಾ?

ಅದರಲ್ಲಿ ಒಂದೆರಡು ವಜ್ರಗಳನ್ನು ನೀನು ತಗೋ, ನಿನ್ ಹೆಂಡತಿಗೆ ಏನಾದ್ರೂ ತಗೊಂಡುಹೋಗು...

...ಇಲ್ಲೇ ಸಮಸ್ಯೆ ಬಗೆಹರಿಸಿಕೊಳ್ಳೋಣ, ಸರಿನಾ?

ಫ್ರೀಟೌನ್ ಗೆ ಹೋಗೋಣ, ಅಲ್ಲಿ ಕರ್ನಲ್ ಕೊಟ್ಜೀಯೆಯವರನ್ನ ಕೇಳೋಣ...

.. ಅವರು ತಮ್ಮ ಬಿಸಿನೆಸ್ ಸಂಗಡಿಗರ ಬಗ್ಗೆ ಏನ್ ಹೇಳ್ತಾರೆ ಅಂತ.

ಕರ್ಕೊಂಡೋಗಿ ಇವನನ್ನ.

ಹೇಯ್! ಏನದು? ಏನ್ ನಡಿತಾ ಇದೆ ಅಲ್ಲಿ?

ಬೇಗ! ಬೇಗ ಸರಿ ಮಾಡಿ ಅದನ್ನ!

ನನ್ನ ಟೈಮ್ ವೇಸ್ಟ್ ಆಗ್ತಾ ಇದೆ! ಏನದು ಹೊಲಸು?

ಬೇಗ ಅದನ್ನ ಸರಿಮಾಡಿ! ಕೆಲಸ ಮಾಡಬೇಕು.

- ಏನ್ ನಡೀತಾ ಇದೆ ಅಲ್ಲಿ? - ಬಾಸ್

- ಸರಿ ಮಾಡಿ ಅದನ್ನ. - ನನಗೆ ಟಾಯ್ಲೆಟ್‍ಗೆ ಹೋಗ್ಬೇಕು. ಈಗಲೇ ಹೋಗ್ಬೇಕು.

- ತಡ್ಕೊಳಕ್ಕಾಗ್ತಿಲ್ಲ, ಬಾಸ್. - ಹೋಗು, ಹೋಗು.

ಕೆಲಸ ಶುರುಮಾಡ್ಕೊಳಿ, ಹೋಗಿ, ಕೆಲಸ ಶುರುಹಚ್ಕೊಳಿ.

ಸುಮ್ನೆ ನನ್ನ ಟೈಮ್ ವೇಸ್ಟ್ ಮಾಡ್ತಿರ. ಹೇಗೆ ಕೆಲಸ ಮಾಡ್ಲಿ ಇಲ್ಲಿ?

ನಿಲ್ಲು!

ನಿನ್ ಕೈ ತೋರ್ಸು.

ಬಾಯಿತೆಗಿ.

ಬೇಗ ಮುಗಿಸು.

ಕೊಡಿಲ್ಲಿ ಅದನ್ನ.

ಕೊಡಿಲ್ಲಿ ಅದನ್ನ.

ಸರ್ಕಾರಿ ಪಡೆಗಳು ಬರ್ತಾ ಇವೆ!

ಓಡಿ, ಓಡಿ, ಓಡಿ!

ಬೇಡ, ಬೇಡ, ಬೇಡ!

ಇಲ್ಲ! ನಾನು ಬಂಡುಕೋರ ಅಲ್ಲ! ನಾನು ಬಂಡುಕೋರ ಅಲ್ಲ!

RUF ಬರ್ತಾ ಇದೆ! RUF ಬರ್ತಾ ಇದೆ!

RUF ಬರ್ತಾ ಇದೆ! RUF ಬರ್ತಾ ಇದೆ! RUF ಬರ್ತಾ ಇದೆ!

RUF ಬರ್ತಾ ಇದೆ! RUF ಬರ್ತಾ ಇದೆ! RUF ಬರ್ತಾ ಇದೆ!

RUF ಬರ್ತಾ ಇದೆ! RUF ಬರ್ತಾ ಇದೆ! RUF ಬರ್ತಾ ಇದೆ!

RUF! RUF! RUF!

RUF! RUF! RUF!

RUF! RUF! RUF!

RUF! RUF! RUF!

ಹೇಯ್,

ಏನ್ ಮಾಡಿದೆ ಅದನ್ನ?

ನಾನು ನಿನ್ ಜೊತೆನೇ ಮಾತಾಡ್ತಾ ಇರೋದು, ಕೇಳ್ಸುತ್ತಾ?

ಆ ವಜ್ರ ಎಲ್ಲಿ? ಪಿಂಕ್ ಬಣ್ಣದ್ದು.

- ನೀನು ತಗೊಂಡುಹೋಗಿದ್ದನ್ನ ನಾನು ನೋಡಿದ್ದೇನೆ. - ನೀನೊಬ್ಬ ಹುಚ್ಚ. ನೀನು ಯಾರು ಅಂತನೇ ನನಗೆ ಗೊತ್ತಿಲ್ಲ.

ಸುಳ್ಳು! ನಾನು ನನ್ನ ಕಣ್ಣಾರೆ ನೋಡಿದೀನಿ.

ದೊಡ್ಡ ವಜ್ರ. ಇದುವರೆಗೂ ನಾನು ನೋಡಿರೋದ್ರಲ್ಲಿ ಅತಿದೊಡ್ಡ ವಜ್ರ.

ಅಣ್ತಮ್ಮಂದಿರಾ, ಈ ಸೂಳೆಮಗನಿಂದ....

ಆ ವಜ್ರ ಕಿತ್ಕೊಂಡವನಿಗೆ ನಾನು ಸಾವಿರ ಡಾಲರ್ ಕೊಡ್ತೀನಿ.

ನಿನಗೆ ಹುಚ್ಚು ಹಿಡಿದಿದೆ! ನೀನೊಬ್ಬ ಹುಚ್ಚ.

ಎಲ್ಲಿದೆ ವಜ್ರ?

ಎಲ್ಲಿದೆ ವಜ್ರ? ನಿನಗೇನಾದ್ರೂ ವಜ್ರ ಕಾಣ್ತಿದೆಯಾ?

ನೀವು ರಾಕ್ಷಸರು ನನ್ನ ಕುಟುಂಬ ನಾಶ ಮಾಡಿದ್ದೀರಿ! ನನ್ನ ಮನೆಮಠ ಎಲ್ಲಾ ಕಳ್ಕೊಂಡಿದ್ದೀನಿ.

ನೋಡಿಲ್ಲಿ, ಏನು ಉಳಿದಿದೆ ಅಂತ?

ಏನುಳಿದಿದೆ?

ವಜ್ರ ಏನಾದ್ರೂ ಇದ್ದರೆ, ಅದನ್ನ ತಗೊಂಡುಹೋದವನು ನೀನೇ!

ಸುಳ್ಳು! ಇವನು ಸುಳ್ಳುಗಾರ!

ನೀನು ಯಾರು ಅಂತ ಗೊತ್ತು, ಸೊಲೊಮನ್ ವ್ಯಾಂಡಿ! ನಿನಗೆ ಒಂದು ಹೆಸರೂ ಇದೆ!

ನಿನಗೆ ಕುಟುಂಬ ಇದೆ! ಅವರನ್ನ ಹುಡುಕಿ ಹಿಡೀತಿನಿ!

ಅವರನ್ನ ಹಿಡೀತಿನಿ!

ನೀನು ನನಗೆ ಸಿಗರೇಟ್ಸ್ ತಂದಿದೀಯಾ ಅಲ್ವಾ? ಪ್ಲೀಸ್

ಡ್ಯಾನಿ, ನಾನು ನಿನಗೆ ಹೇಳೋದೇನಂದ್ರೆ..

ನೀನು ಆ ವಜ್ರಗಳನ್ನ ಕಳ್ಕೊಳ್ಳೋದು ಕರ್ನಲ್‍ಗೆ ಇಷ್ಟ ಆಗಲ್ಲ.

ಕರ್ನಲ್ ಇರಲಿ. ಅಲ್ಲೊಬ್ಬ ಮೀನುಗಾರ ಇದಾನಲ್ವಾ?

ಅವನತ್ರ ಆ ದೊಡ್ಡ ಪಿಂಕ್ ಬಣ್ಣದ ವಜ್ರ ಇರಬಹುದು.

ಕರ್ನಲ್‍ಗೆ ಆ ವಜ್ರ ಬೇಕಂತೆ.

ಕರ್ನಲ್‍ಗೆ ಗೋಲಿಹೊಡಿ. ನಾನು ಲಂಡನ್ನಲ್ಲಿರೋ ನನ್ನ ಗೆಳೆಯರನ್ನ ಸಂಪರ್ಕಿಸ್ತೀನಿ.

ನಾನು ಅಂದುಕೊಂಡಷ್ಟು ದೊಡ್ಡ ವಜ್ರ ಅದಾಗಿದ್ದರೆ, ಅದನ್ನ ಕೊಂಡುಕೊಳ್ಳುವವನೊಬ್ಬನ ಅಗತ್ಯವಿದೆ, ಸರಿನಾ?

ಏನು? ಏನು?

ಲಂಡನ್ನಿನವರಿಗೆ ನಿನ್ನ ಜೊತೆ ವ್ಯವಹಾರ ಸಾಕಾಗಿದೆ.

"ಸಿಯೆರ್ರಾ ಲಿಯೋನ್‍ನಲ್ಲಿ ಡ್ಯಾನಿ ಆರ್ಚರ್ ಬಂಧನ... ಒಬ್ಬ ಮಾಜಿ ಬಾಡಿಗೆ ಸೈನಿಕ ಹಾಗೂ ಸ್ಮಗ್ಲರ್...."

"ವಾನ್ ಡೆ ಕಾಪ್ ನ ವಜ್ರ ಹತೋಟಿಕೂಟದ ಜೊತೆ ನಿಕಟ ಸಂಬಂಧ ಹೊಂದಿದ್ದಾನೆ.

ಮೂಲಗಳ ಪ್ರಕಾರ ಅವರು ಅಂತಹ ಸಂಬಂಧವನ್ನ ನಿರಾಕರಿಸುತ್ತಾರೆ".

ಥೂ....

ಕೇಳಿಲ್ಲಿ, ಅವನ ಹೆಸರು ಸೊಲೊಮನ್ ವ್ಯಾಂಡಿ.

ವಾನ್ ಡೆ ಕಾಪ್‍ಗೆ ಆ ವಜ್ರ ಬೇಕು, ಯಾರು ಏನಾದ್ರೂ ಹೇಳಲಿ, ನೀನು ಅವನನ್ನ ಹೊರಗೆ ತರಬೇಕು.

ಅವನನ್ನ ಹೊರಗೆ ತರಬೇಕು.

ಡ್ಯಾನಿ ಆರ್ಚರ್ ಕರೆದಿದ್ದಾರೆ ಅಂತ ಮಿಸ್ಟರ್ ಸಿಮ್ಮೋನ್ಸ್ ಗೆ ಹೇಳ್ತೀರಾ?

ಆರ್ಚರ್. ಆ-ರ್-ಚ-ರ್

ಹಾಯ್ ಡಾರ್ಲಿಂಗ್

ಬಿಳಿಮನುಷ್ಯ ಒಬ್ನೇ ಹೊರಗೆ ತಿರುಗಾಡೋದು... ಇದು ಚೆನ್ನಾಗಿರಲ್ಲ.

- ನಾನು ಸುರಕ್ಷಿತವಾಗಿದ್ದೇನೆ, ಏಡ್ಸ್ ಇಲ್ಲ. - ಹೌದು, ಹೌದು, ಹಾಗಂತ ಯಾರೋ ಹೇಳಿದ್ದನ್ನ ಕೇಳಿದ್ದೇನೆ.

Comments

No comments yet. Be the first to leave one.

Keep it about this subtitle — sync, quality, typos.500 characters left